ವಿಶ್ವ ಯುವ ಕೌಶಲ್ಯ ದಿನ 2023: ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನ ಆಚರಣೆ ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. 2014 ರಲ್ಲಿ ಜುಲೈ 15 ರಂದು ವಿಶ್ವಸಂಸ್ಥೆಯ ಸಾಮನ್ಯ ಸಭೆಯಲ್ಲಿ, ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡುತ್ತ ಬರಲಾಗುತ್ತಿದೆ.
ವಿಶ್ವ ಯುವ ಕೌಶಲ್ಯ ದಿನ 2023: ಜುಲೈ 15 ವಿಶ್ವ ಯುವ ಕೌಶಲ್ಯ ದಿನ ಆಚರಣೆ ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ..PC-VK
ಹೈಲೈಟ್ಸ್:
ಇಂದು ವಿಶ್ವ ಯುವ ಕೌಶಲ್ಯ ದಿನ.
ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನ ಆಚರಣೆ.
ವಿಶ್ವ ಯುವ ಕೌಶಲ್ಯ ದಿನ ಆಚರಣೆ ಏಕೆ?.
"ವಿಶ್ವ ಯುವ ಕೌಶಲ್ಯ ದಿನ". ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಯುವಜನೆತೆಯಲ್ಲಿ ಕೌಶಲ್ಯ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಕೌಶಲ್ಯದ ಪ್ರಾಮುಖ್ಯತೆಯನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡಲಾಗುತ್ತದೆ.
ಯುವಜನತೆಯಲ್ಲಿ ವೃತ್ತಿ, ಜೀವನ ಕೌಶಲ್ಯ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಕೌಶಲ್ಯವನ್ಜು ಮೈಗೂಡಿಸಿಕೊಳ್ಳಬೇಕು ಮತ್ತು ಕೌಶಲ್ಯದ ಪ್ರಯೋಜನಗಳನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಿ ಅದರ ಮಹತ್ವವನ್ನು ತಿಳಿಸುವ ಉದ್ದೇಶವಾಗಿದೆ. ಈ ದಿನದಂದು ಉದ್ಯೋಗದಾತರು, ಉದ್ಯಮ ಮತ್ತು ಉದ್ಯೋಗ ಬಯಸುವವರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಮತ್ತು ನೈಪುಣ್ಯತೆ ಸಾಧಿಸುವಂತೆ ಯುವಜನೆತಯನ್ನು ಪ್ರೇರೆಪಿಸಲಾಗುತ್ತದೆ.
2014 ರಲ್ಲಿ ಜುಲೈ 15 ರಂದು ವಿಶ್ವಸಂಸ್ಥೆಯ ಸಾಮನ್ಯ ಸಭೆಯಲ್ಲಿ, ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡುತ್ತ ಬರಲಾಗುತ್ತಿದೆ. 2030 ರವೆಳೆಗೆ ಎಲ್ಲ ವರ್ಗದವರಿಗೂ ಸಂಪೂರ್ಣ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಒದಗಿಸುವ ಗುರಿಯನ್ನು ವಿಶ್ವ ಸಂಸ್ಥೆ ಹೊಂದಿದೆ.
No comments:
Post a Comment